logo logo  
 
  +91-80-23505928
  info@discovertech.co.in
  Innovating Business Solutions  
    Kannada Websites (ಕನ್ನಡ ಅಂತರ್ಜಾಲ ತಾಣಗಳು)
 
 

ಕರ್ನಾಟಕದ ಮಾತೃಭಾಷೆ "ಕನ್ನಡ"ದ ಅಂತರ್ಜಾಲ ತಾಣಗಳ ವಿನ್ಯಾಸ, ಅಬಿವೃದ್ಧಿ ಮತ್ತು ನಿರ್ವಹಣಾ ಸಂಸ್ಥೆ "ಡಿಸ್ಕವರ್ ಟೆಕ್ನಾಲಜೀಸ್" ಬೆಂಗಳೂರು ಇವರ ಅಧಿಕೃತ ಅಂತರ್ಜಾಲ ತಾಣಕ್ಕೆ ತಮಗೆಲ್ಲರಿಗೂ ಆದರದ ಆತ್ಮೀಯ ಸುಸ್ವಾಗತ.

ಇಂದು ಅಂತರ್ಜಾಲ (ಇಂಟರ್ನೆಟ್) ಮಾನವನಿಗೆ ಕೇವಲ ಅತ್ಯಂತ ವೇಗವಾಗಿ ಮಾಹಿತಿಯನ್ನು ಒಯ್ಯುವ ಸಾಧನವಾಗಿ ಉಳಿಯದೆ, ಪ್ರತಿಯೊಬ್ಬರ ಙ್ಞಾನದಾಹವನ್ನು ಮಾಹಿತಿಯ ಮೂಲಕ ಇಂಗಿಸುವ ಹೆಮ್ಮರವಾಗಿ ಬೆಳೆದು ನಿಂತಿದೆ. ಯಾವುದೇ ವ್ಯಕ್ತಿ ತಮಗೆ ಆಸಕ್ತಿ ಇರುವ ವಿಷಯವನ್ನು ಸುದೀರ್ಘವಾಗಿ ತಿಳಿದುಕೊಳ್ಳಲು ಮತ್ತು ಅಭ್ಯಸಿಸಲು ಅನುವು ಮಾಡಿಕೊಡುವ ಬಹುದೊಡ್ಡ ಮಾಧ್ಯಮವೇ ಅಂತರ್ಜಾಲ. ಇದರ ಮೂಲಕ ಗ್ರಾಹಕರು ತಾವು ಇಚ್ಚಿಸುವ ಯಾವುದೇ ಮಾಹಿತಿಯನ್ನು ಪ್ರಪಂಚದ ಯಾವುದೇ ಮೂಲೆಯಿಂದಾದರೂ ಕ್ಷಣಮಾತ್ರದಲ್ಲಿ ಅಂತರ್ಜಾಲ ತಾಣ (ವೆಬ್-ಸೈಟ್)ಗಳನ್ನು ಸಂದರ್ಶಿಸುವ ಮೂಲಕ ಪಡೆಯಬಹುದು.

ಸಾಮಾನ್ಯವಾಗಿ ಅಂತರ್ಜಾಲ ತಾಣ (ವೆಬ್-ಸೈಟ್)ಗಳು ಮತ್ತು ಅದರ ಪುಟಗಳು, ಆಂಗ್ಲಭಾಷೆಯಲ್ಲಿ ಇರುತ್ತವೆ. ಆದರೆ ಕೇವಲ ಸ್ಠಳೀಯ ಭಾಷೆಯನ್ನು ಮಾತ್ರವೇ ತಿಳಿದಿರುವ ಜನಸಾಮಾನ್ಯರು, ಅದರಲ್ಲೂ ಗ್ರಾಮೀಣ ಪ್ರದೇಶದ ಜನಗಳಿಗೆ ಅಂತರ್ಜಾಲವೆಂಬುದು ಗಗನಕುಸುಮವಾಗಿತ್ತು. ಆದರೆ ಹೊಸ ತಾಂತ್ರಿಕತೆಯ ಅವಿಷ್ಕಾರದಿಂದಾಗಿ ಪ್ರಾದೇಶಿಕ ಭಾಷೆಗಳಲ್ಲಿಯೂ ಅಂತರ್ಜಾಲ ತಾಣಗಳನ್ನು ಅಬಿವೃದ್ಧಿಪಡಿಸುವುದು ಸಾಧ್ಯವಾಗಿದೆ. ಈ ತಾಂತ್ರಿಕತೆಯ ನಿಪುಣತೆಯನ್ನು ಪಡೆದಿರುವ "ಡಿಸ್ಕವರ್ ಟೆಕ್ನಾಲಜೀಸ್" ಕನ್ನಡದಲ್ಲಿಯೇ ಅಂತರ್ಜಾಲ ತಾಣ (ವೆಬ್-ಸೈಟ್)ಗಳು ಮತ್ತು ಅದರ ಪುಟಗಳನ್ನು ವಿನ್ಯಾಸ ಮತ್ತು ಅಭಿವೃದ್ಧಿಪಡಿಸಿ ಪ್ರಪಂಚ ಮೂಲೆ-ಮೂಲೆಗಳಲ್ಲಿ ವಾಸಿಸುತ್ತಿರುವ ಕನ್ನಡಿಗರಿಗೆ ಕನ್ನಡದ ಅಳಿಲು ಸೇವೆಯನ್ನು ಸಲ್ಲಿಸುತ್ತಿದೆ.

 
ಮುಂದಿನ ಪುಟ ಓದಿ >>
 
  Web Services
  Web Designing
  Web Packages
  Customers
  Logo Designing
  Web Hosting
  E-Commerce
  SEO
  E-mail Solution
  Terms & Conditions
 
© 2010-11 All Rights Reserved. Discover Technologies  Home | About Us | Technology | Services | Portfolio | Careers | FAQ | Feedback | Reach Us 
  Download Brochure | Sitemap | Privacy policy | Terms of use | Email Login